ಬಿ.ಬಿ.ಎಂ.ಪಿ. ಪ್ರಥಮ ದರ್ಜೆ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆ ರಾಮನಗರ ತಾಲ್ಲೂಕು ಕೆಂಪದ್ಯಾಪನಹಳ್ಳಿಯಲ್ಲಿ ಆಯೋಜಿಸಿ ಸ್ವಯಂ ಜಾಗೃತಿ ತಂಡವನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ರಾಜ್ಯಾಧ್ಯಕ್ಷರಾದ ಅಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಇಂದ್ರ ಕುಮಾರ್ ಒಂದಿಷ್ಟು ಸಮಾಜದ ನಿರ್ಮಾಣಕ್ಕಾಗಿ ಕಿವಿಮಾತುಗಳನ್ನ ನೀಡಿದರು. ತಂಡದಿಂದ ಊರಿನ ಗ್ರಾಮಸ್ಥರೆಲ್ಲರಿಗೂ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವ ಕಿರು ಚಿತ್ರವನ್ನು ಕೂಡ ಪ್ರದರ್ಶಿಸಲಾಯಿತು.
ಸ್ವಯಂ ಜಾಗೃತಿ ಸೇವಾ ಟ್ರಸ್ಟ್ (ರಿ) ವತಿಯಿಂದ ಪ್ರತಿವರ್ಷದಂತೆ ಜೂನ್ 5 ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ #ಸ್ವಚ್ಚತೆನಮ್ಮಆದ್ಯತೆ ಕಾರ್ಯಕ್ರಮದಡಿಯಲ್ಲಿ ಶಿವಗಂಗೆ ಕ್ಷೇತ್ರದಲ್ಲಿ ಸ್ವಚ್ಚತಾ ಕಾರ್ಯ ಹಾಗೂ ಪ್ರವಾಸಿಗರಿಂದ ಸಹಿ ಸಂಗ್ರಹಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಈ ಮೂಲಕ ಆ ಸ್ಥಳಗಳದಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್, ಬಾಟಲ್,ಕವರ್ ಎಲ್ಲವನ್ನೂ ಸ್ಥಳೀಯ ಪಂಚಾಯಿತಿ ಅಧಿಕಾರಿಗಳ ಸಮಕ್ಷಮದಲ್ಲಿ ಪೌರ ಕಾರ್ಮಿಕರಿಗೆ ನೀಡಲಾಯಿತು. ದೇವಸ್ಥಾನದ ಮುಂಭಾಗದಲ್ಲಿ ಇರುವ ಕಲ್ಯಾಣಿಯು ಪ್ಲಾಸ್ಟಿಕ್ ನಿಂದ ಕಲುಷಿತಗೊಂಡಿತ್ತು ಅದನ್ನು ಕೂಡ ತಂಡದ ಸದಸ್ಯರು ಶ್ರಮದಾನ ನೆಡೆಸಿ ಸ್ವಚ್ಚಗೋಳಿಸಲಾಯಿತು.
ಬೆಂಗಳೂರಿಗೆ ಹತ್ತಿರವಾಗಿರುವಂತಹ ಏಕಶಿಲಾ ಬೆಟ್ಟ ಸಾವನದುರ್ಗ. ಸಾಹಸಿ ಪ್ರವಾಸಿಗರನ್ನು ಆಕರ್ಷಿಸುವಂತಹ ಒಂದು ಉತ್ತಮ ಪ್ರವಾಸಿ ತಾಣ. ಆದರೆ ಇಲ್ಲಿನ ಪರಿಸ್ಥಿತಿ ನೋಡಿದರೆ ವಿಷಾದವಾಗುತ್ತದೆ. ಕಾರಣ ಇಲ್ಲಿಗೆ ಭೇಟಿ ನೀಡುವಂತಹ ಪ್ರವಾಸಿಗರು ಬಿಸಾಕುವಂತಹ ಪರಿಸರಕ್ಕೆ ಮಾರಕವಾಗುವಂತಹ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಕವರ್ ಗಳು, ಇನ್ನಿತರ ವಸ್ತುಗಳನ್ನು ( ಮಧ್ಯದ ಬಾಟಲ್) ಬಿಸಾಕುತ್ತಾರೆ. ಇದರಿಂದ ಈ ಸ್ಥಳವು ಮಲಿನಗೊಂಡಿರುವುದನ್ನು ಗಮನಿಸಿದ ಸ್ವಯಂ ಜಾಗೃತಿ ತಂಡ ನಡೆಸಿದಂತ ಶ್ರಮದಾನದ ಪ್ರತಿಫಲದ ಚಿತ್ರಿ ಸ್ವಚ್ಚಗೋಳಿಸಲಾಯಿತು.
ಬೆಂಗಳೂರಿನ ಕಬ್ಬನ್ ಪಾರ್ಕ್, ಹಾಗೂ ಲಾಲ್ಬಾಗ್, ಹೊರತುಪಡಿಸಿ. ಹೆಚ್ಚು ಹಸಿರನ್ನು ಹೊಂದಿರುವ ಪ್ರದೇಶವೆಂದರೆ ನಾಗರಬಾವಿ ಬಳಿ ಇರುವ ಬೆಂಗಳೂರು ವಿಶ್ವ ವಿದ್ಯಾಲಯ. ಈ ಪ್ರದೇಶದಲ್ಲಿ ಸಾರ್ವಜನಿಕರು ಎಸೆಯುವಂತ ಕಸವನ್ನು. ಸ್ವಚ್ಛಗೊಳಿಸಿ ಆ ಪ್ರದೇಶದಲ್ಲಿ ಜಾಗೃತಿ ಬೋರ್ಡ್ ಗಳನ್ನು ಹಾಕಲಾಗಿತ್ತು.
ಬೇಸಿಗೆಯ ಉಷ್ಣತೆ ಹೆಚ್ಚಾಗಿರುವುದರಿಂದ ಪ್ರಾಣಿ, ಪಕ್ಷಿಗಳಿಗೆ ನೀರನ್ನುಣಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು. ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಜನರಿಗೆ ಮನೆಯ, ಮೇಲೆ ಹಾಗೂ ಗೇಟಿನ ಮುಂಭಾಗದಲ್ಲಿ, ಇರಿಸುವಂತಹ ನೀರಿನ ಕುಂಡಗಳನ್ನು ಪ್ರತಿ ಬೇಸಿಗೆಯಲ್ಲಿ ಉಚಿತವಾಗಿ ನೀಡಲಾಗುವುದು.